shadakshara murthy
vande mataram
Saturday, January 29, 2011
Monday, July 27, 2009
Friday, July 24, 2009
"ಇಕ್ಕೇರಿ ಮತ್ತು ವರದಹಳ್ಳಿ"

೨೦೦೯ರ ಮೇ ತಿಂಗಳಿನಲ್ಲಿ ನನ್ನ ಚಿಕ್ಕಮ್ಮನ ಅಂದರೆ ನನ್ನ ತಂಗಿಯ ಮದುವೆಗೆ ಶಿವಮೊಗ್ಗಕ್ಕೆ ಹೋಗಿದ್ದೆವು, ನನ್ನ ಚಿಕ್ಕಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರು ಮದುವೆಗೆ ಬಂದಿರಲಿಲ್ಲ, ನಾನು ಅಮ್ಮ ಅವರನ್ನು aನೋಡಿಕೊಂಡು ನಮ್ಮದೇ ಕಾರಿನಲ್ಲಿ ಸಾಗರಕ್ಕೆ ಹೋದೆವು. ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನನ್ನ ಚಿಕ್ಕಪ್ಪ ಮನೆಗೆ ಹೋದಾಗಲೆಲ್ಲ ನೋಡಬೇಕಿನಿಸುವುದು ಇಕ್ಕೇರಿ ಮತ್ತು ವರದಹಳ್ಳಿ, ಈ ಸಾರಿ ಇಕ್ಕೇರಿ ಗೆ ಹೋಗಲು ಆಗಲಿಲ್ಲ ವರದಹಳ್ಳಿಗೆ ನಾನು, ಅಮ್ಮ, ಚಿಕ್ಕಪ್ಪನ ಮಗ ಕಾರ್ತಿಕ್, ಲಕ್ಷ್ಮಿ ಎಲ್ಲರೂ ಹೋಗಿ "ಶ್ರೀಧರ ಸ್ವಾಮಿ" ಗುರುಗಳ ದರ್ಶನ ಮಾಡಿಕೊಂಡು ಬಂದೆವು. ಇಕ್ಕೇರಿ ಹಾಗು ವರದಹಳ್ಳಿಗೆ ಮೊದಲ ಬಾರಿ ನೋಡಿದ್ದು ೨೦೦೩ರಲ್ಲಿ, ನಾನು ಕಾರ್ತಿಕ್ ಸೈಕಲ್ನಲ್ಲಿ ಹೋಗಿದ್ದೆವು, ಅಲ್ಲಿಯೇ ತೀರ್ಥ ಸ್ನಾನ ಮಾಡಿದೆವು, ಕೊಳದ ಹತ್ತಿರ "ಈಜು ಹೊಡೆಯಬಾರದೆಂದು" ಬರೆಸಿದ್ದಾರೆ. ನಾವಿಬ್ಬರೂ ಮೂರು ಬಾರಿ ಮುಳುಗು ಹಾಕಿ, ತೀರ್ಥ ಸ್ನಾನ ಮುಗಿಸಿ ದೇವರ ದರ್ಶನ ಮಾಡಿಕೊಂಡು ಪ್ರಸಾದವನ್ನು ಸ್ವೀಕರಿಸಿ ಬೆಟ್ಟದ ಮೇಲ್ಲೆಲ್ಲ ಸುತ್ತಾಡಿಕೊಂಡು ಬಂದೆವು.
’ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ’
ವಂದೇ ಗೋ ಮಾತರಂ,
ಭಾರತ ದೇಶದ ಹಸುಗಳನ್ನು ರಕ್ಷಿಸುವ ಸಲುವಾಗಿ ಸಾಧು ಸಂತರ ನೇತ್ರುತ್ವದಲ್ಲಿ ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ ಆರಂಭಿಸಲಾಗುತ್ತಿದೆ. ಈ ಯಾತ್ರೆಯು ೩೦ನೇ ಸೆಪ್ಟoಬರ್ ೨೦೦೯ ರಿಂದ ಆರಂಭಿಸಿ ೧೦೮ ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯು ಒಟ್ಟು ೨೦ ಸಾವಿರ ಕಿ. ಮೀ ಸಾಗಲಿದೆ, ೪೦೦ ಕೇಂದ್ರಗಳಲ್ಲಿ ಸಭಾ ಕಾರ್ಯಕ್ರಮ ಹಾಗು ಎಲ್ಲಾ ಜಿಲ್ಲೆ - ತಾಲ್ಲೋಕು ಹಾಗು ಹೋಬಳಿ ಕೇಂದ್ರಗಳಿಂದ ೧೫ ಸಾವಿರ ಉಪಯಾತ್ರೆಗಳು ನಡೆಯಲಿದೆ ಈ ಉಪಯಾತ್ರೆಗಳು ಒಟ್ಟು ೧೦ ಲಕ್ಷ ಕ್ರಮಿಸಲಿದೆ. ಯಾತ್ರೆಯ ಸಮರೋಪವು ೧೭ ಜನವರಿ ೨೦೧೦ ಮಕರ ಸಂಕ್ರಾತಿಯ ದಿನದಂದು ನಾಗಪುರದಲ್ಲಿ ನಡೆಯಲಿದೆ.
ಹೆಚ್ಹಿನ ಮಾಹಿತಿಗಾಗಿ ಈ ತಾಣವನ್ನು ವೀಕ್ಷಿಸಿ : http://kan.gougram.org/
Thursday, May 15, 2008
ಅನಿಸಿಕೆ
ನಮಸ್ಕಾರ,
ಇದರಲ್ಲಿ ಏನು ಬರೆಯಬೇಕು ಅಂತ ಗೊತ್ತಾಗುತ್ತ ಇಲ್ಲ. ಆದರೂ ಬರೀಬೇಕು ಅನ್ನಿಸುತ್ತಾ ಇದೆ. ಇದರಲ್ಲಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಅಂತ ಗೊತ್ತಾಗಿದ್ದೆ ನಿನ್ನೆ ಮತ್ತು ಇವತ್ತು ಅಂದ್ರೆ ದಿನಾಂಕ ಮೇ ೧೪ ಮತ್ತು ೧೫, ಬುಧವಾರ ಹರ್ಷರವರ ಒಂದು ಇ-ಮೆಯಿಲ್ ನೋಡಿದ ಮೇಲೆ. ಮತ್ತೆ ಹರ್ಷ ಚಾಟಿಂಗ್ ನಲ್ಲಿ ಕೇಳಿದರು ನನ್ನ ಬ್ಲಾಗ್ ನಲ್ಲಿ ಇರುವ ಅಂಕಣ ಓದಿದ್ರ ನಿಮ್ಮ ಅಭಿಪ್ರಾಯ ಏನು ಹೇಳಿ ಅಂತ. ನನಗೆ ಕೆಲಸ ಇದೆ ಸಂಜೆ ಓದಿ ಹೇಳುತ್ತೇನೆ ಅಂತ ಹೇಳಿದೆ. ಹರ್ಷರವರ ಸ್ವಂತ ಊರು ದಾವಣಗೆರೆ, ಅವರ ಊರು ಬಿ ಬಿ ಸಿ ನ್ಯೂಸ್ ಚಾನೆಲ್ ನಲ್ಲಿ ಮೂರು ಬರಿ ಪ್ರಸ್ತಾಪ ಆಗಿದೆಯೆಂತೆ. ಅದರಲ್ಲಿ ಮೊದಲೆನೆಯದು - ಬಾಬ್ರಿ ಮಸೀದಿ ಹೊಡೆದು ಹಾಕಿದಾಗ ಅವರ ಬಾಲ್ಯದ ನೆನಪುಗಳು, ಡ್ಯಾಮ್ ಗೆ ಬಸ್ ಬಿದ್ದು ೮೦ ಜನ ಸತ್ತಿದ್ದು ಮತ್ತು ಬೋರ್ ವೆಲ್ ಗೆ ಕರಿಯ ಎಂಬ ಹುಡುಗ ಬಿದ್ದು ಸತ್ತ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದಾರೆ. ಇವತ್ತಿನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಗೂಗಲ್ ಬಗ್ಗೆ ಓದಿದಾಗ, ಅದರಲ್ಲಿ ಕನ್ನಡದಲ್ಲೂ ಯಾವುದೇ ವಿಷಯಗಳನ್ನು ಹುಡುಕಬಹುದು ಮತ್ತು ನಮ್ಮ ಸ್ವಂತ ಬ್ಲಾಗ್ ಕ್ರಿಯೇಟ್ ಮಾಡಿ ಅದರಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಅಂತ, ಅದಕ್ಕೆ ನಾನು ಇವತ್ತು ನನ್ನದೇ ಆದ ಸ್ವಂತ ಬ್ಲಾಗ್ ಕ್ರೆಯೇಟ್ ಮಾಡಿ ನಾನೂ ಏನಾದ್ರೂ ಬರೀಬೇಕು ಅಂತ ಇಸ್ಟ್ಟನ್ನು ಬರೆದಿದ್ದೆನಿ. ವಿಷಯಗಳು ತುಂಬ ಇದೆ ಬರೆಯಲು ಆದರೆ ಸಮಯದ ಅಭಾವ ಇದೆ ಇಸ್ಟ್ಟನ್ನು ಇದರಲ್ಲಿ ಬರೆಯಲು ಒಂದು ಗಂಟೆ ಮೂವತ್ತು ನಿಮಿಷ ಆಯ್ತು. ಹಾಳೆಯಲ್ಲಿ ಬರೆದಸ್ತ್ತು ಸುಲಭ ಅಲ್ಲ ಇದರಲ್ಲಿ ಬರೆಯುವುದು, ಬಹಳ ಕಸ್ಟ್ಟ ಸಮಯ ಬಹಳ ತೆಗೆದುಕೊಳ್ಳುತ್ತದೆ.

Subscribe to:
Posts (Atom)